Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

2015-16ರಲ್ಲಿ ಸೆನ್ಸೆಕ್ಸ್‌ ಶೇ.9.36 ಇಳಿಕೆ

$
0
0

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ 3.28 ಅಂಕ ಚೇತರಿಕೆಯೊಂದಿಗೆ 25,341.86ಕ್ಕೆ ಪ್ರಸಕ್ತ ಆರ್ಥಿಕ ಸಾಲಿನ ಕೊನೆಯ ದಿನದ ಆಟವನ್ನು ಮುಕ್ತಾಯಗೊಳಿಸಿತು. ಈ 2015-16ರಲ್ಲಿ ಸೆನ್ಸೆಕ್ಸ್‌ ಶೇ.9.36ರಷ್ಟು ಇಳಿಕೆ ದಾಖಲಿಸಿದ್ದು, ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ನಷ್ಟವಾಗಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ವಿದೇಶಿ ಹೂಡಿಕೆಯ ಹೊರ ಹರಿವಿನ ಹೆಚ್ಚಳ ಇದಕ್ಕೆ ಕಾರಣವಾಗಿತ್ತು. ಜಾಗತಿಕ ಷೇರು ಮಾರುಕಟ್ಟೆಯಲ್ಲೂ ಗುರುವಾರ ವಹಿವಾಟು ನಕಾರಾತ್ಮಕವಾಗಿತ್ತು.

ಜಾಗತಿಕ ಮಾರುಕಟ್ಟೆಯಲ್ಲಿ 2015-16ರಲ್ಲಿ ಸರಕುಗಳ ದರ ತೀವ್ರ ಕುಸಿದಿತ್ತು. ಅಮೆರಿಕದಲ್ಲಿ ಫೆಡರಲ್‌ ರಿಸವ್‌ರ್‍ ಮೊದಲ ಸಲ ಬಡ್ಡಿ ದರ ಹೆಚ್ಚಳ ಮಾಡಿತ್ತು. ಮುಖ್ಯವಾಗಿ ಚೀನಾದ ಆರ್ಥಿಕ ಬೆಳವಣಿಗೆ ಮಂದಗತಿಗೆ ತಿರುಗಿತ್ತು. ಸೆನ್ಸೆಕ್ಸ್‌ 2015-16ರಲ್ಲಿ ಒಟ್ಟು 2,615.63 ಅಂಕಗಳನ್ನು ಕಳೆದುಕೊಂಡಿತ್ತು. 2011-12ರ ನಂತರ ಅತ್ಯಂತ ಕಳಪೆ ಪ್ರದರ್ಶನ ಇದಾಗಿದೆ. ಹೂಡಿಕೆದಾರರ ಸಂಪತ್ತಿನಲ್ಲಿ 7 ಲಕ್ಷ ಕೋಟಿ ರೂ. ನಷ್ಟವಾಗಿದ್ದು, ಪ್ರತಿ ದಿನದ ವಹಿವಾಟಿನಲ್ಲಿ ಸರಾಸರಿ 2,700 ಕೋಟಿ ರೂ. ಲುಕ್ಸಾನಾಗಿದೆ. ನಿಫ್ಟಿ ಕೂಡ 2015-16ರಲ್ಲಿ 752 ಅಂಕ ಕಳೆದುಕೊಂಡಿತ್ತು.


Viewing all articles
Browse latest Browse all 7056

Trending Articles