Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಏರ್ ಇಂಡಿಯಾದಲ್ಲಿ ಇತಿಹಾಸ ಸೃಷ್ಟಿಗೆ ಮಹಿಳೆಯರು ರೆಡಿ

$
0
0

* ಮಹಿಳಾ ದಿನಾಚರಣೆಯಂದು ಏರ್ ಇಂಡಿಯಾದ ಮಹಿಳಾ ಉದ್ಯೋಗಿಗಳ ಸಾಹಸ

* 15 ಗಂಟೆಗಳ ವಿಮಾನ ಹಾರಾಟಕ್ಕೆ ಮಹಿಳೆಯರದ್ದೇ ಸಂಪೂರ್ಣ ಸಾರಥ್ಯ

* ಪೈಲಟ್ ಸೇರಿ 14 ಸಿಬ್ಬಂದಿ ಸ್ತ್ರೀಯರೇ.

* ದೇಶೀಯ ಮಾರ್ಗದ 20 ವಿಮಾನಗಳಲ್ಲಿ ಸಂಪೂರ್ಣ ಸ್ತ್ರೀ ಶಕ್ತಿ

ಹೊಸದಿಲ್ಲಿ: ಹೊಸದಿಲ್ಲಿಯಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊಗೆ ಮಾರ್ಚ್ 6ರಂದು ಹಾರಾಟ ನಡೆಸಲಿರುವ ಏರ್ ಇಂಡಿಯಾದ ವಿಮಾನದಲ್ಲಿ ಮಹಿಳೆಯರು ಹೊಸ ಇತಿಹಾಸವನ್ನೇ ನಿರ್ಮಿಸಲಿದ್ದಾರೆ! ಈ ಸುದೀರ್ಘ ಮಾರ್ಗದಲ್ಲಿ ವಿಮಾನದ ಎಲ್ಲ ಸಿಬ್ಬಂದಿ ಸ್ತ್ರೀಯರೇ ಆಗಿದ್ದು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲಿದ್ದಾರೆ.

ಈ ''ಚಾರಿತ್ರಿಕ'' ವಿಮಾನ ಹಾರಾಟದಲ್ಲಿ 14 ಮಂದಿ ಸಿಬ್ಬಂದಿ ಮತ್ತು ನಾಲ್ವರು ಪೈಲಟ್‌ಗಳು ಪಾಲ್ಗೊಳ್ಳಲಿದ್ದಾರೆ. ಎಲ್ಲರೂ ಮಹಿಳೆಯರಾಗಿದ್ದು, ಹೊಸ ದಾಖಲೆ ಬರೆಯಲಿದ್ದಾರೆ. ಸುಮಾರು 15 ಗಂಟೆಗಳ ಕಾಲ ವಿಮಾನ ಹಾರಾಟದ ಸಕಲ ಜವಾಬ್ದಾರಿ, ಸಾರಥ್ಯವನ್ನು ಮಹಿಳಾಮಣಿಗಳು ನಿರ್ವಹಿಸಲಿದ್ದಾರೆ.

ಹೊಸದಿಲ್ಲಿಯಿಂದ ಮಾರ್ಚ್ 6ರಂದು ಹೊರಡಲಿರುವ ವಿಮಾನ ಮಾರ್ಚ್ 8ರಂದು ಹಿಂತಿರುಗಲಿದೆ. ಇದರಲ್ಲದೆ ಮಾರ್ಚ್ 8ರಂದು ದೇಶೀಯ ಮಾರ್ಗಗಳಲ್ಲಿ ಒಟ್ಟು 20 ವಿಮಾನಗಳಲ್ಲಿ ಪೂರ್ತಿ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಏರ್ ಇಂಡಿಯಾ ತಿಳಿಸಿದೆ.

ಈ ಹಿಂದೆ 1985ರಲ್ಲಿ ಏರ್‌ಇಂಡಿಯಾ ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣ ಮಹಿಳಾ ಸಿಬ್ಬಂದಿ ಇರುವ ವಿಮಾನ ಹಾರಾಟ ನಡೆಸಿತ್ತು. '' ಇದು ಮಹಿಳಾ ಸಬಲೀಕರಣದ ಸಂಕೇತ'' ಎಂದು ಏರ್ ಇಂಡಿಯಾದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಅಶ್ವಿನಿ ಲೊಹಾನಿ ಹೇಳಿದ್ದಾರೆ.

''ಇದು ಮಹಿಳಾ ಸಿಬ್ಬಂದಿಯೇ ಮುನ್ನಡೆಸುವ ಅತಿ ದೀರ್ಘ ವಿಮಾನ ಹಾರಾಟವಾಗಿ ಇತಿಹಾಸ ಸೃಷ್ಟಿಸಲಿದೆ'' ಎಂದವರು ಹೇಳಿದ್ದಾರೆ.

ಏರ್ ಇಂಡಿಯಾದಲ್ಲಿ 3,800 ಮಹಿಳಾ ಸಿಬ್ಬಂದಿ ಇದ್ದಾರೆ. ಒಟ್ಟು 27,500 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ.


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>