Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಸಿಂಪಲ್ಲಾಗ್ ಉಲ್ಟಾ ಕತೆ ಹೇಳಿದ ಸುನಿ

$
0
0

* ಪದ್ಮಿನಿ ಜೈನ್
ಸುನಿ ನಿರ್ದೇಶನದ ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಚಿತ್ರವು ಕತೆಯಿಂದಾಗಿ ಗಮನ ಸೆಳೆಯುತ್ತಿದೆ. ಇದು ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ ಸಿನಿಮಾದ ಮುಂದುವರಿದ ಭಾಗ ಎನ್ನಲಾಗಿತ್ತು. ಆದರೆ, ಆ ಸಿನಿಮಾಗಿಂತ ಮೊದಲೇ ಈ ಕತೆಯು ಬರುತ್ತದೆಯಂತೆ. ಹಾಗಾಗಿ ಈ ಸಿನಿಮಾವನ್ನು ನೋಡಿಕೊಂಡು ಹೋದವರು ಮತ್ತೆ ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ ಚಿತ್ರ ನೋಡುತ್ತಾರೆ ಅಂತಾರೆ ನಿರ್ದೇಶಕರು.

ಇಂತಹ ಪ್ರಯೋಗ ನಿಜಕ್ಕೂ ಕುತೂಹಲ ಮೂಡಿಸಿದೆ. ಈವರೆಗೂ ಮೊದಲ ಭಾಗದ ಕತೆ ಹೇಳಿ, ಆನಂತರ ಮುಂದುವರಿದ ಕತೆಯನ್ನು ಸಿನಿಮಾ ಮಾಡಿದ್ದಿದೆ. ಆದರೆ, ಸುನಿ ಈ ಬಾರಿ ಅದನ್ನು ಉಲ್ಟಾ ರೀತಿಯಲ್ಲಿ ಹೇಳುತ್ತಿದ್ದಾರೆ.

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರಕ್ಕಿಂತಲೂ ಮೊದಲೇ ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ ಚಿತ್ರದ ಕತೆ ತಯಾರಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಆ ಕತೆಯನ್ನು ಪಕ್ಕಕ್ಕಿಡಬೇಕಾಯಿತು. ಅಲ್ಲಿರುವ ಎರಡೇ ಪಾತ್ರಗಳನ್ನು ಹೈಲೈಟ್ ಮಾಡಿ ಹೊಸ ಕತೆ ಮಾಡಿದೆವು. ಅದನ್ನೇ ಮೊದಲ ಚಿತ್ರೀಕರಿಸಿ, ಈಗ ಹಳೆಯ ಕತೆಗೆ ವಾಪಸ್ ಹೋಗಿದ್ದೇವೆ. ನಿಜಕ್ಕೂ ಸಿನಿಮಾ ಮಜವಾಗಿದೆ' ಅಂತಾರೆ ನಿರ್ದೇಶಕರು. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಶ್ವೇತಾ ಶ್ರೀವಾತ್ಸವ್ ನಾಯಕ, ನಾಯಕಿ. ಇನ್ನೊಂದ್ ಲವ್‌ಸ್ಟೋರಿಯಲ್ಲಿ ರಕ್ಷಿತ್ ಜಾಗಕ್ಕೆ ಪ್ರವೀಣ್ ಮತ್ತು ಶ್ವೇತಾ ಪಾತ್ರಕ್ಕೆ ಮೇಘನಾ ಗಾಂವ್ಕರ್ ಇದ್ದಾರೆ. ಉಳಿದವರು ಕಂಡಂತೆ ಖ್ಯಾತಿಯ ಹೇಮಂತ್ ಕೂಡ ಇಲ್ಲಿ ವಿಭಿನ್ನ ಪಾತ್ರ ಪೋಷಿಸಿದ್ದಾರೆ. ಹೀಗಾಗಿ ಇನ್ನೊಂದ್ ಲವ್‌ಸ್ಟೋರಿಯು ಮತ್ತಷ್ಟು ಕುತೂಹಲ ಮೂಡಿಸಿದೆ.

ಇಡೀ ಸಿನಿಮಾವನ್ನು ಕಲರ್‌ಫುಲ್ ಆಗಿ ಕಟ್ಟಿಕೊಟ್ಟಿದ್ದಾರೆ ಸುನಿ. ಶೂಟ್ ಮಾಡಲೆಂದೇ ಅವರು ಅನೇಕ ಊರುಗಳನ್ನು ಸುತ್ತಿದ್ದಾರೆ. ಚಿತ್ರೀಕರಣಕ್ಕಾಗಿ ನೀರು ಮತ್ತು ಹಸಿರು ತುಂಬಿರುವ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದು ಮತ್ತೊಂದು ವಿಶೇಷ.

ಮೇಲ್ನೋಟಕ್ಕೆ ಈ ಚಿತ್ರ ಕತೆಯು ಪ್ರಯಾಣದಲ್ಲೇ ಸಾಗಿದರೂ, ಇಡೀ ಪಯಣವು ಸಂಗೀತಮಯವಾಗಿದೆ. ಹೀಗಾಗಿ ಚಿತ್ರಕ್ಕೆ ಇಬ್ಬರು ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ. ಈಗಾಗಲೇ ಹಾಡುಗಳೂ ಹಿಟ್ ಆಗಿವೆ.

ಸುನಿ ಇದ್ದರೆ ಅಲ್ಲಿ ಹಾಡು ಮತ್ತು ಕಚಗುಳಿ ಇಡುವ ಡೈಲಾಗ್ ಇದ್ದೇ ಇರುತ್ತದೆ. ಈ ಸಿನಿಮಾದಲ್ಲೂ ಅವೆರಡರ ಮ್ಯಾಜಿಕ್ ನೋಡಬಹುದು.


Viewing all articles
Browse latest Browse all 7056

Latest Images

Trending Articles



<script src="https://jsc.adskeeper.com/r/s/rssing.com.1596347.js" async> </script>