Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಹಳೆ ಹೊಸ ಕಲಾವಿದರ ಸಂಗಮ

$
0
0

ಹಲವು ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಮತ್ತೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಕಾಲದ ಕಲಾವಿದರ ಜತೆಗೆ ಹೊಸ ತಲೆಮಾರಿನ ನಟರನ್ನೂ ಸೇರಿಸಿ 'ರೆ' ಹೆಸರಿನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರವು ಮಾರ್ಚ್ 4ರಂದು ತೆರೆಗೆ ಬರುತ್ತಿದೆ.

ಸ್ಯಾಡಲ್‌ವುಡ್‌ನಲ್ಲಿ ಹಲವು ಟ್ರೆಂಡ್ ಸೆಟ್ಟಿಂಗ್ ಸಿನಿಮಾ ನೀಡಿರುವ ದೇಸಾಯಿ, ಮತ್ತೆ ಸಿನಿಮಾ ರಂಗಕ್ಕೆ ಬರಬೇಕು ಅನ್ನುವುದು ಹಲವರ ಬೇಡಿಕೆ ಆಗಿತ್ತು. ಅದನ್ನು ಅವರು ಈ ಸಿನಿಮಾದ ಮೂಲಕ ಈಡೇರಿಸಿದ್ದಾರೆ.

ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. 'ಇಫ್ಸ್ ಹಾಗೂ ಬಟ್ಸ್'ಗಳ ಸುತ್ತ ಇಡೀ ಕತೆ ಹೆಣೆದದ್ದು ವಿಶೇಷ. 'ನಮ್ಮ ಬದುಕಿನಲ್ಲಿ ರೆ ಅನ್ನುವ ಮಾಯೆ ಸಾಕಷ್ಟು ಬಾರಿ ಎದುರಾಗುತ್ತದೆ. ಹೀಗಾದರೆ, ಹಾಗಾದರೆ, ಆಗದಿದ್ದರೆ ಎಂಬುದರ ಸುತ್ತವೇ ಮಾತುಗಳು ಕೇಳಿ ಬರುತ್ತವೆ. ನಾಳೆಯ ಕನಸುಗಳೂ ಕೂಡ ರೆ ಮೇಲೆಯೇ ಅವಲಂಬಿತವಾಗಿವೆ. ಹೀಗಾಗಿ ಅದನ್ನೇ ಸಿನಿಮಾ ಮಾಡಿದ್ದೇನೆ' ಅಂತಾರೆ ನಿರ್ದೇಶಕರು.

ಸಿನಿಮಾದ ಮತ್ತೊಂದು ವಿಶೇಷತೆ ಅಂದರೆ ತಾರಾಗಣ. ರಮೇಶ್ ಅರವಿಂದ್ ಕಥಾ ನಾಯಕ. ಹರ್ಷಿಕಾ ಪೂಣಚ್ಚ ಹಾಗೂ ಸುಮನ್ ನಾಯಕಿಯರು. ಇವರ ಜೊತೆಗೆ ಅನಂತ್‌ನಾಗ್, ಮಾಸ್ಟರ್ ಹಿರಣ್ಯಯ್ಯ, ಶಿವರಾಮ್, ಲೋಕನಾಥ್ ಮುಂತಾದ ಹಿರಿಯ ಕಲಾವಿದರೂ ಪಾತ್ರ ಪೋಷಿಸಿದ್ದಾರೆ.

'ಸಾಮಾನ್ಯವಾಗಿ ಸಿನಿಮಾ ಅಂದರೆ ಅಲ್ಲೊಂದಿಷ್ಟು ಮೆಸೇಜ್ ಇರಬೇಕು ಎಂದು ಬಯಸುತ್ತಾರೆ. ಆದರೆ, ನಮ್ಮ ಸಿನಿಮಾದಲ್ಲಿ ಸಂದೇಶಕ್ಕಿಂತ ಪ್ರೇಕ್ಷಕನಿಗೆ ಮನರಂಜನೆ ನೀಡುವಲ್ಲಿ ವಿಶೇಷವಾಗಿ ಕಾಳಜಿ ವಹಿಸಿದ್ದೇವೆ. ಚಿತ್ರಕತೆಯನ್ನು ಕೇಳುವಾಗ ಫಿಲಾಸಫಿಕಲ್ ಸಿನಿಮಾ ಅನಿಸಿದರೂ, ಎಲ್ಲಿಯೂ ನಾವು ಬೋಧನೆ ಮಾಡಿಲ್ಲ. ಇಡೀ ಸಿನಿಮಾ ನಗುತ್ತಲೇ ಸಾಗುತ್ತದೆ' ಅನ್ನುವುದು ದೇಸಾಯಿ ಅವರ ಮಾತು.

ಶರತ್ ಲೋಹಿತಾಶ್ವ ಸ್ಕ್ರೀನ್ ಮೇಲೆ ಬಂದರೆ ಸಾಕು, ಅವರೇ ಸಿನಿಮಾದ ವಿಲನ್ ಅನ್ನುವ ಭಾವ ಮೂಡುತ್ತದೆ. ಆದರೆ, ರೆಗ್ಯುಲರ್ ಆಗಿ ತೋರಿಸುವ ವಿಲನ್ ಕ್ಯಾರೆಕ್ಟರ್ ಅವರದ್ದಲ್ಲ. ಯಾರನ್ನೂ ಕ್ರೂರವಾಗಿ ಚಿತ್ರಸಿಲ್ಲ.

ದೇಸಾಯಿ ಅವರ ಚಿತ್ರಗಳಲ್ಲಿ ಬಹುತೇಕವಾಗಿ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶ ಇದ್ದೇ ಇರುತ್ತದೆ. ಈ ಬಾರಿ ಅದನ್ನು ಮುರಿದು ಹಾಕಿದ್ದಾರೆ. ಪಕ್ಕಾ ಕಾಮಿಡಿ ಪ್ಯಾಕೇಜ್ ಅನ್ನು ಈ ಚಿತ್ರದ ಮೂಲಕ ಕೊಟ್ಟಿದ್ದಾರೆ.


Viewing all articles
Browse latest Browse all 7056

Latest Images

Trending Articles



Latest Images

<script src="https://jsc.adskeeper.com/r/s/rssing.com.1596347.js" async> </script>