Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಭಲೇ ಜೋಡಿ: ಮಿತಿಗಳ ನಡುವಿನ ಹಿತ

$
0
0

- ಶಶಿಧರ ಚಿತ್ರದುರ್ಗ

ರೀಮೇಕ್ ಮಾಡಲೇಬೇಕು ಎಂದು ಪಟ್ಟುಹಿಡಿದರೆ ಎಂತಹ ಸಿನಿಮಾ ಮಾಡಬೇಕೆನ್ನುವುದಕ್ಕೆ 'ಭಲೇ ಜೋಡಿ' ಒಂದು ಉತ್ತಮ ಉದಾಹರಣೆ! ಪ್ರೇಮಿಗಳ ಮನಸಿನ ವ್ಯಾಪಾರದ ಕಥೆಯಾದ್ದರಿಂದ ಇದಕ್ಕೆ ಕಾಲಘಟ್ಟದ ಮಿತಿಗಳೇನೂ ಇಲ್ಲ. ಮತ್ತೊಂದೆಡೆ ತೆಳುಹಾಸ್ಯದೊಂದಿಗೆ ಲವ್‌ಸ್ಟೋರಿ ಹೇಳುವ ಇಲ್ಲಿನ ನಿರೂಪಣಾ ಶೈಲಿಯೂ ಚೆನ್ನಾಗಿದೆ. ಆ ಮಟ್ಟಿಗೆ ನಿರ್ದೇಶಕ ಸಾಧುಕೋಕಿಲ ರೀಮೇಕ್ ಕಥೆಯ ಆಯ್ಕೆ ಮತ್ತು ಇದನ್ನು ಕನ್ನಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಬಹುಪಾಲು ಕ್ರೆಡಿಟ್ ಮೂಲ ತೆಲುಗು ಸಿನಿಮಾದ ಚಿತ್ರಕಥೆಗಾರರು ಮತ್ತು ನಿರ್ದೇಶಕರಿಗೆ ಸಲ್ಲಬೇಕು.

ಐದು ವರ್ಷಗಳ ಹಿಂದೆ ತೆರೆಕಂಡ 'ಅಲಾ ಮೊದಲೈಂದಿ' ಯಶಸ್ವೀ ತೆಲುಗು ಸಿನಿಮಾದ ಕನ್ನಡ ಅವತರಣಿಕೆಯಿದು. ತೆಳುಹಾಸ್ಯದೊಂದಿಗೆ ಲವ್‌ಸ್ಟೋರಿ ಹೇಳುವ ಅಲ್ಲಿನ ಜನಪ್ರಿಯ ಟ್ರೆಂಡ್‌ನ ಜಾಡಿನಲ್ಲಿ ಗೆಲುವು ಕಂಡ ಸಿನಿಮಾ. ಕಥೆಗೆ ತಿರುವು ನೀಡಲೆಂದೇ ರೂಪಿಸಿಕೊಂಡ ವಿಶಿಷ್ಠ ನಿರೂಪಣಾ ಶೈಲಿ, ಪ್ರೇಮಿಗಳ ಮನಸಿನ ತೊಳಲಾಟಕ್ಕೆ ಜತೆಯಾಗುವ ಅವರ ಪೋಷಕರು, ಆಕರ್ಷಕ ಲೊಕೇಲ್‌ಗಳಲ್ಲಿ ಹಾಡುಗಳ ಚಿತ್ರೀಕರಣ... ಈ ಮಾದರಿ ಸಿನಿಮಾಗಳ ಹೈಲೈಟ್. ಮನರಂಜನೆಯೇ ಮುಖ್ಯವಾದ ಇಂತಹ ಕಥೆಗಳಲ್ಲಿ ಪ್ರೇಕ್ಷಕರು ಲಾಜಿಕ್ ಹುಡುಕುವಂತಿಲ್ಲ!

ಮೂಲ ತೆಲುಗು, ತಮಿಳು ರಿಮೇಕ್ ನೋಡದವರು ಕನ್ನಡ ಅವತರಣಿಕೆಯನ್ನು ಸವಿಯಬಹುದು. ಇದು ರೀಮೇಕ್ ಸಿನಿಮಾಗಳ ಮಿತಿ ಎನ್ನುವುದು ಜಾಣ ಪ್ರೇಕ್ಷಕರಿಗೆ ಈಗಾಗಲೇ ಮನವರಿಕೆಯಾಗಿದೆ. ಐದು ವರ್ಷದ ಹಿಂದೆ ತೆಲುಗು ಸಿನಿಮಾ ತಯಾರಾಗುವ ಹೊತ್ತಿನಲ್ಲಿ ಸಾಫ್ಟ್‌ವೇರ್ ಜಗತ್ತಿನಲ್ಲಿನ್ನೂ ರಿಸಿಷನ್ ಬಿಸಿಯಿತ್ತು. ಈಗ ತೆರೆಕಂಡಿರುವ ಕನ್ನಡ ಸಿನಿಮಾದಲ್ಲಿ ಪಾತ್ರಗಳು ರಿಸಿಷನ್ ಕುರಿತು ಮಾತನಾಡುವುದು ಅಪ್ರಸ್ತುತವಲ್ಲವೇ? ಅದೇ ರೀತಿ ತೆಲುಗು ಸಿನಿಮಾಗಳಲ್ಲಿ ಹಾಸ್ಯನಟರಿಗೆ ಆಗಾಗ 'ಛಟೀರ್ ಛಟೀರ್' ಎಂದು ಕೆನ್ನೆಗೆ ಭಾರಿಸುವ ಹೀರೋ ಕನ್ನಡಿಗರಿಗೆ ಇಷ್ಟವಾಗೋಲ್ಲ ಡೈರೆಕ್ಟ್ರೇ...!

ಪಾತ್ರಧಾರಿಗಳ ವಿಷಯಕ್ಕೆ ಬರೋದಾದ್ರೆ, ಹೀರೋ ಸುಮಂತ್ ಶೈಲೇಂದ್ರ ಮತ್ತು ಹಿರೋಯಿನ್ ಸಾನ್ವಿ ಲವಲವಿಕೆಯಿಂದ ಅಭಿನಯಿಸಿದ್ದಾರೆ. ನಟ ರವಿಶಂಕರ್ ಅವರನ್ನು ನಿಸ್ಸಂಶಯವಾಗಿ ಚಿತ್ರದ ಮತ್ತೊಬ್ಬ ಹೀರೋ ಎಂದು ಕರೆಯಬಹುದು! ಕಾಮಿಡಿ ವಿಲನ್ 'ಗೆಜ್ಜೆ ಕೇಸರಿ'ಯಾಗಿ ಅವರು ಪ್ರೇಕ್ಷಕರನ್ನು ರಂಜಿಸುತ್ತಾರೆ. ಹರೆಯದ ಮಗನ ಮನಸ್ಸಿನ ಗೋಜಲನ್ನು ಅಳೆಯುವ ಹೆತ್ತಮ್ಮನಾಗಿ ಸುಮಲತಾ ಅವರದ್ದು ಉತ್ತಮ ಅಭಿನಯ. ದ್ವಂದ್ವಾರ್ಥದ ಸಂಭಾಷಣೆ, ಅನಗತ್ಯ ಗಿಮಿಕ್‌ಗಳಿಲ್ಲದ ಚಿತ್ರವನ್ನು ಫ್ಯಾಮಿಲಿ ಎಂಟರ್‌ಟೇನರ್ ಪಟ್ಟಿಗೆ ಸೇರಿಸಬಹುದು.


Viewing all articles
Browse latest Browse all 7056

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>