Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ದಶಕ ಪೂರೈಸಿದ ಟೈಮ್ಸ್ ನೌ

$
0
0

ಹೊಸದಿಲ್ಲಿ: ದೇಶದ ಜನರ ಮನೆ ಮಾತಾಗಿರುವ 'ಟೈಮ್ಸ್ ನೌ' ಸುದ್ದಿ ವಾಹಿನಿ ಬುಧವಾರ ಹತ್ತು ವರ್ಷ ಪೂರೈಸಿತು. ಚಾನೆಲ್ ಹತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮಾತನಾಡಿದ ವಾಹಿನಿಯ ಸಿಇಒ ಎಂ.ಕೆ. ಆನಂದ್, ವಾಹಿನಿಯು ಮಾಧ್ಯಮ ನೀತಿಯಂತೆ ನಿಖರ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಬದ್ಧತೆ ಕಾಪಾಡಿಕೊಂಡು ಬರುತ್ತಿದೆ ಎಂದು ಹೇಳಿದರು.

ವಾಹಿನಿಯ ಎಡಿಟರ್ - ಇನ್ - ಚೀಫ್ ಅರ್ನಬ್ ಗೋಸ್ವಾಮಿ ನಡೆಸಿಕೊಡುವ ''ನ್ಯೂಸ್ ಹವರ್'' ಕಾರ್ಯಕ್ರಮ ಎಲ್ಲರ ಮನೆ ಮಾತಾಗಿದೆ. ಹತ್ತು ವರ್ಷಗಳ ಹಿಂದೆ ಇಂತಹುದೊಂದು ಬೃಹತ್ ಬ್ರಾಂಡ್ ನಮಗಿರಲಿಲ್ಲ ಎಂಬುದನ್ನು ಕಲ್ಪಿಸಿಕೊಳ್ಳುವುದೇ ಕಷ್ಟವಾಗುತ್ತಿದೆ ಎಂದು ಆನಂದ್ ಅವರು ಹರ್ಷ ವ್ಯಕ್ತಪಡಿಸಿದರು.

ಪ್ರಸಾರ ವೀಕ್ಷಕರ ಸಂಶೋಧನಾ ಮಂಡಳಿ ( ಬಿಎಆರ್‌ಸಿ) ನೀಡಿರುವ ಅಂಕಿ ಅಂಶದ ಪ್ರಕಾರ ಟೈಮ್ಸ್ ನೌ ಸುದ್ದಿವಾಹಿನಿ, ದೇಶದ ಇಂಗ್ಲಿಷ್ ನ್ಯೂಸ್ ಚಾನೆಲ್‌ಗಳ ಪೈಕಿ ಶೇ. 43ರಷ್ಟು ಮಾರುಕಟ್ಟೆ ಪಾಲು ಹೊಂದಿದೆ ಎಂದು ಅವರು ಇದೇ ವೇಳೆ ವಿವರಿಸಿದರು.

ಸುದ್ದಿ ವಾಹಿನಿಯು, ಅರ್ನಬ್ ಗೋಸ್ವಾಮಿ ನೇತೃತ್ವದಲ್ಲಿ ಹೊಸ ಹೊಸ ಪರಿಕಲ್ಪನೆ, ಕಾರ್ಯಕ್ರಮಗಳೊಂದಿಗೆ ವೃತ್ತಿಪರವಾಗಿ ಮುನ್ನುಗ್ಗುತ್ತಿದೆ ಎಂದು ಅವರು ವಿವರಿಸಿದರು.


Viewing all articles
Browse latest Browse all 7056

Latest Images

Trending Articles



Latest Images

<script src="https://jsc.adskeeper.com/r/s/rssing.com.1596347.js" async> </script>