Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ನೀಚ ರಾಶಿಯ ಗ್ರಹಗಳ ಫಲ

$
0
0

ಮನುಷ್ಯನಾದವನು ಶಾಪವನ್ನು ಪಡೆಯುತ್ತಾನೆ, ಅನುಗ್ರಹವನ್ನು ಪಡೆಯುತ್ತಾನೆ. ಗ್ರಹಗಳು ಮನುಷ್ಯನ ರೂಪದಲ್ಲಿ ಫಲಕೊಡುತ್ತದೆ. ಗುರು ಗ್ರಹ ವಿದ್ಯಾದಾತನು, ಗುರುವನ್ನು ಮೀನ ದೃಷ್ಟಿಯಿಂದ ನೋಡುವುದು, ಗುರುವಿಗೆ ಹಾಸ್ಯ ಮಾಡುವುದು ಗುರುಗಳಿಗೆ ಕೂಡ ಬೇಕಾದುದನ್ನು ಕೊಡದೆ ಇರುವುದು, ಹೀಗೆ ಗುರುಗಳಿಗೆ ನಾನಾ ತರಹದ ಅಪಚಾರ ಮಾಡುತ್ತಾರೆ. ಇದರಿಂದ ಗುರು ಶಾಪ ತಟ್ಟುತ್ತದೆ. ಕೆಲವರು ಗುರು ಉಪಚಾರ ಮಾಡುತ್ತಾರೆ. ಗುರು ಸೇವೆ ಮಾಡುವುದು, ಅವರು ಸುಖವಾಗಿರುವಂತೆ ನೋಡುತ್ತಾರೆ. ಇದರಿಂದ ಗುರು ಅನುಗ್ರಹ ಸಿಗುತ್ತದೆ. ಗುರುವಿನ ಅನುಗ್ರಹಕ್ಕೆ ಕಾರಣ ಗುರು ಉಚ್ಛರಾಶಿಯಲ್ಲಿದ್ದಾಗ ಹುಟ್ಟಿದವರಿಗೆ ಶಾಪ ಸಿಗುವುದು, ಗುರು ನೀಚ ರಾಶಿಯಲ್ಲಿ ಇದ್ದಾಗ ಜನಿಸಿದಾಗ. ಗುರು ಗ್ರಹಕ್ಕೆ ಸಲ್ಲುವ ನೀಚತ್ವ ಆಗಲೀ ಉಚ್ಛತ್ವವಾಗಲಿ ಇಲ್ಲ. ಈ ಗ್ರಹ ಗುಣ ವಿಶೇಷಗಳು ಪ್ರಾಪ್ತಿ ಆಗುವುದಿಲ್ಲ. ಜಾತಕದಲ್ಲಿ ಗುರು ಬಲ ಇದ್ದರೆ ಒಳ್ಳೆಯ ವಿದ್ಯೆ ಗುಣ ನಡತೆ ದೇವತಾ ಭಕ್ತಿ ಇರುತ್ತದೆ. ಗುರುಬಲ ಇಲ್ಲದೆ ಯಾವುದು ಇಲ್ಲ. ಅದರಂತೆ ಎಲ್ಲಾ ಗ್ರಹಗಳಿಗೂ ಫಲ ಇದೆ. ರವಿ ಎಂದರೆ ತಂದೆ, ಚಂದ್ರನೆಂದರೆ ತಾಯಿ, ಕುಜನೆಂದರೆ ಸೋದರ, ಬುಧನೆಂದರೆ ಮಾವ. ಮಿತ್ರ ಬಂಧುಗಳು ಶುಕ್ರನೆಂದರೆ ಹೆಂಡತಿ. ಶನಿ ಎಂದರೆ ಬಳಗದವ. ಈ ರೀತಿಯ ಶಾಪಗಳು ಮೇಲಿನಂತೆ ಇದೆ. ಮೇಲೆ ಹೇಳಿದ ಉದಾಹರಣೆಗೆ ಬುಧನು ಮೀನರಾಶಿಯಲ್ಲಿದ್ದಾನೆ. ಇದು ಬುಧನ ನೀಚ ರಾಶಿಸಂಚಾರ ಆಗುತ್ತದೆ. ಗುರು ಮಿಥುನದಲ್ಲಿದ್ದಾನೆ. ಮೀನಕ್ಕೆ ಬರಲು ಒಂಬತ್ತು ವರ್ಷ, ಇಪತ್ತೆರಡು, ಮೂವತ್ತನಾಲ್ಕು, ನಾಲ್ವತ್ತಾರು ಈ ವರ್ಷಗಳಲ್ಲಿ ಗುರುವು ಬುಧನಿರುವ ರಾಶಿಯಲ್ಲಿ ಬರುತ್ತಾನೆ. ಈ ಕಾಲದಲ್ಲಿ ಗೃಹ ಬದಲು ಅನ್ಯಗೃಹವಾಸ ಬಾಡಿಗೆ ಕೊಟ್ಟು ವಾಸ ಇದರಿಂದ ಚರ್ಮವ್ಯಾಧಿ, ಬುದ್ಧಿ ಚಾಪಲ್ಯ ಚಿಂತೆ ಇತ್ಯಾದಿ ಫಲಗಳು ನಡೆಯುವುದು. ಬಂಧುಗಳಲ್ಲಿ ಕಷ್ಟ ಸಾವು ನೋವುಗಳು ಅನುಭವಕ್ಕೆ ಬರುತ್ತದೆ. ಈ ಬುಧನಿಗೆ ಶಾಂತಿ ಮಾಡಬೇಕು. ಬಂಧುಗಳಲ್ಲಿ ತನ್ನ ಮನೋವೃತ್ತಿ ಉತ್ತಮಗೊಳಿಸಬೇಕು. ಅವರ ಬಗ್ಗೆ ಸಹಾನುಭೂತಿ ಸಹಕಾರ ಹೊಂದಬೇಕು. ಹೀಗೆ ಮಾಡಿದರೆ ಮರಳಿ ಗುರು ಬಂದಾಗ, ಗ್ರಹ ಪ್ರಾಪ್ತಿ ಬಂಧು ಕಲ್ಯಾಣ ಇತ್ಯಾದಿ ಶುಭ ಫಲಗಳೇ ನಡೆಯುತ್ತದೆ. ಈ ರೀತಿ ಗಣಿತ ಗೊಂದಲ ಇಲ್ಲದೆ ಫಲವನ್ನು ಹೇಳಬಹುದಾಗಿದೆ.



Viewing all articles
Browse latest Browse all 7056

Latest Images

Trending Articles



Latest Images

<script src="https://jsc.adskeeper.com/r/s/rssing.com.1596347.js" async> </script>