-ಪದ್ಮಾ ಶಿವಮೊಗ್ಗ
ಡಟ್‌ರ್ ರೇಸ್‌ನಂತೆಯೇ ನೈಜವಾಗಿ ಚಿತ್ರೀಕರಣ ಮಾಡಲಾಗಿದೆ ಎಂದು ಸುದ್ದಿಯಲ್ಲಿದ್ದ ಚಿತ್ರ ಒನ್ ಟೈಮ್. ಇದರ ಜತೆಯಲ್ಲಿ ಕನ್ನಡದ 15 ನಿರ್ದೇಶಕರು ನಟಿಸಿರುವ ಚಿತ್ರ ಎಂಬ
ಪ್ರಚಾರವನ್ನೂ ಮಾಡಲಾಗಿತ್ತು. ಹೊಸಬರ ತಂಡವೊಂದು ಮಾಡಿದ ಮೊದಲ ಚಿತ್ರ ಇದಾಗಿದ್ದರೂ,ಅದನ್ನು ನೋಡಲೂ ಯೋಚಿಸುವಂತಿದೆ.
ವಿಜಯ್ (ತೇಜಸ್) ಬೈಕ್ ರೇಸ್‌ನಲ್ಲಿಗೆದ್ದು ಶೀಲ್‌್ಡ ತಂದರೆ, ಮನೆಯಲ್ಲಿಅಪ್ಪ(ನಾಗಾಭರಣ) ದೇವರಿಗೆ ಎಣ್ಣೆ ಖರ್ಚಾಗುತ್ತೆ ಅಂತ ದೇವರ ಮುಂದೆ ಹಚ್ಚಿದ ದೀಪ ಆರಿಸು ಎನ್ನುತ್ತಿರುತ್ತಾನೆ. ಮಗ ನಾಲಾಯಕ್ ಎಂಬ ಅಭಿಪ್ರಾಯ ಆತನದ್ದು. ಇನ್ನು ವಿಜಯ್ ಜತೆಖಾಲಿ ತಿರುಗಿಕೊಂಡು ಇರೋ ಹುಡುಗರು. ಒಮ್ಮೆ ಪೋಲಿಗಳ ಗ್ಯಾಂಗ್ ಹುಡುಗಿಯೊಬ್ಬಳನ್ನುರೇಪ್ ಮಾಡಲು ಪ್ರಯತ್ನಿಸಿದಾಗ ವಿಜಯ್ ಅವಳನ್ನು ರಕ್ಷಿಸುತ್ತಾನೆ. ಇದನ್ನು ನೋಡಿದ ಕಾಲೇಜ್ ವಿದ್ಯಾರ್ಥಿನಿ ನಂದಿನಿ (ನೇಹಾ ಸಕ್ಸೇನಾ) ವಿಜಯ್‌ನನ್ನು ಇಷ್ಟಪಡುತ್ತಾಳೆ.
ವಿಜಯ್‌ಗೂ ಇವಳ ಮೇಲೆ ಪ್ರೀತಿ ಹುಟ್ಟಿಬಿಡುತ್ತದೆ. ಈ ನಡುವೆ ವಿಜಯ್ ಸ್ನೇಹಿತನೊಬ್ಬ ತಾನು ಪ್ರೀತಿಸಿದ ಹುಡುಗಿಯೊಂದಿಗೆ ಮನೆ ಬಿಟ್ಟು ಹೋಗಿ ಮದುವೆಯಾಗಿಬಿಡುತ್ತಾನೆ. ನಂದಿನಿ ಅಣ್ಣನಿಗೆ ಹೆದರಿ ಮನೆಬಿಟ್ಟು ವಿಜಯ್ ಬಳಿಗೆ ಬರುತ್ತಾಳೆ. ಇಬ್ಬರೂ ಓಡಿ ಹೋಗಿ ಮದುವೆಯಾಗಬೇಕು ಎನ್ನುವಾಗ ವಿಜಯ್ ಸ್ನೇಹಿತನೊಬ್ಬ ಎಂಟ್ರಿ ಕೊಡುತ್ತಾನೆ. ಓಡಿ ಹೋಗಿ ಮದುವೆಯಾಗಬೇಡಿ ಎಂದು ಬುದ್ಧಿವಾದ ಹೇಳುವ ಆತ ತನ್ನ ಬದುಕಿನ ದುರಂತ ಕತೆಯನ್ನು ಹೇಳುತ್ತಾನೆ. ಹಣವಿಲ್ಲದೆ ಸಂಸಾರ ನಡೆಸಲಾಗದು. ಇದೇ ಕಾರಣಕ್ಕೆ ಕಾರಣಕ್ಕೆ
ಗರ್ಭಿಣಿ ಹೆಂಡತಿಯನ್ನು ಕಳೆದುಕೊಂಡಿರುತ್ತಾನೆ ಅವನು. ಒಂದು ಕಡೆ ನೇಹಾಗಾಗಿ ಅವಳ ಅಣ್ಣ ರೌಡಿಗಳನ್ನು ಕಳಿಸಿದರೆ, ಇನ್ನೊಂದು ಕಡೆ ವಿಜಯ್ ಅಪ್ಪ ಮಗಳನ್ನು ಮದುವೆಯಾಗಲು ಒಪ್ಪುವ ಹುಡುಗನಿಗೆ ಇದ್ದ ಅಂಗವಿಕಲೆ ತಂಗಿಯನ್ನು ವಿಜಯ್‌ಗೆ ತಂದುಕೊಳ್ಳುವುದಾಗಿ ಮಾತು ಕೊಡುತ್ತಾನೆ. ಹೀಗಿರುವಾಗ ವಿಜಯ್ ಮತ್ತು ನೇಹಾ ಮದುವೆಯಾಗುತ್ತಾರಾ? ವಾಪಸ್ ಮನೆಗೆ ಹೋಗುತ್ತಾರಾ? ಎನ್ನುವುದನ್ನು ಸಿನಿಮಾದಲ್ಲಿನೋಡಬೇಕು. ಪ್ರೀತಿಸಿದ ಮಾತ್ರಕ್ಕೆ ಮನೆಯವರನ್ನು ಧಿಕ್ಕರಿಸಿ ಹೋಗಬಾರದು. ಅವರನ್ನು ಒಪ್ಪಿಸಿ ಮದುವೆಯಾಗುವುದು ಲೇಸು ಎಂಬುದನ್ನು ಹೇಳುವ ಪ್ರಯತ್ನ ನಿರ್ದೇಶಕರದ್ದಾಗಿದೆ.
ಇನ್ನು, ಚಿತ್ರ ಪ್ರಾರಂಭವಾದ ಕೆಲ ನಿಮಿಷಗಳಲ್ಲಿಪ್ರೇಕ್ಷಕನಿಗೆ ನಿರಾಶೆಆವರಿಸುತ್ತದೆ. ಹೆಜ್ಜೆ ಹೆಜ್ಜೆಗೆ ಕೈಯಲ್ಲಿರಿಮೋಟ್ ಇದ್ದರೆ ಫಾಸ್ ಪಾರ್ವಡ್‌ರ್ ಮಾಡೋಣ ಎಂದು ಮನಸ್ಸು ತವಕಿಸುತ್ತದೆ. ನಟರ ಆಯ್ಕೆಯಿಂದ ಮೊದಲುಗೊಂಡು ತಾಂತ್ರಿಕ ವಿಭಾಗದವರಿಗೂ ನಿರ್ದೇಶಕರ ಎಡವಟ್ಟುಗಳು ಎದ್ದು ಕಾಣುತ್ತವೆ. ಸಿನಿಮಾಗೆ ಬೇಕಿರದಿದ್ದರೂ 15 ನಿರ್ದೇಶಕರಿಗಾಗಿಯೇ ಚಿಕ್ಕ ಚಿಕ್ಕ ದೃಶ್ಯಗಳನ್ನು ಪೋಣಿಸಲಾಗಿದೆ. ಅವು ಸ್ವಾರಸ್ಯಕರವಾಗಿಯೂ ಇಲ್ಲ. ಜತೆಗೆ ಕೆಲ ನಿರ್ದೇಶಕರ ನಟನೆ ಬೋರ್ ಹೊಡೆಸುತ್ತದೆ. ನಾಯಕ ನಟನಾಗಿ ತೇಜಸ್ ಮುಂದೆ ಪ್ರಯತ್ನ ಪಟ್ಟರೆ ಇನ್ನಷ್ಟು
ಉತ್ತಮವಾಗಿ ನಟಿಸಬಹುದಿತ್ತು. ನೇಹಾ ಸಕ್ಸೇನಾ ನಟನೆ ನಾಟಕೀಯ. ಅವರಿಗೆ ಡಬ್ಬಿಂಗ್ ಮಾಡಿರುವುದು ಇನ್ನೂ ಕೃತಕವಾಗಿದೆ. ಸಿನಿಮಾದಲ್ಲಿಎಂಥದ್ದೋ ಒಂದು ಕತೆಯಾದರೂ ಇದೆ ಅಂತಸಮಾಧಾನ ಪಟ್ಟುಕೊಳ್ಳೋಣ ಎಂದರೆ, ಅದೂ ದುರ್ಬಲ. ಚಿತ್ರದಲ್ಲಿಒಂದು ಹಾಡು ಮಾತ್ರ ಕೇಳೋ ಹಾಗಿದೆ.
↧
ಒನ್ ಟೈಮ್: ನಿರ್ದೇಶಕರೇ ನಟಿಸಿರುವ ನೀರಸ ಸಿನಿಮಾ
↧