Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಗುರುವಾರವೇ ಮುನ್ಸೂಚನೆ ಸಿಕ್ಕಿತ್ತೇ?

$
0
0

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆ ಸಮೀಪದಲ್ಲಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಉಗ್ರರು ಪ್ಲಾನ್‌ ನಡೆಸಿರುವ ಬಗ್ಗೆ ಎರಡು ದಿನಗಳ ಹಿಂದೆಯೇ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು ಎಂದು ಹೇಳಲಾಗಿದೆ.

ಸೆ.12 ಮತ್ತು 13ರಂದು ಗುಪ್ತಚರ ದಳ ಉರಿ ಸೆಕ್ಟರ್‌ಗೆ ಅಕ್ರಮ ನುಸುಳುವಿಕೆಯ ಮಾಹಿತಿ ನೀಡಿತ್ತು. ಅದಾದ ಬಳಿಕ ಸೆ. 15ರಂದು, ಆತ್ಮಹತ್ಯಾ ದಾಳಿ ಬಗ್ಗೆಯೂ ಅಲರ್ಟ್‌ ಮಾಡಿತ್ತು. ಗುಪ್ತಚರ ಮಾಹಿತಿಯಲ್ಲಿ, ಸೇನಾ ನೆಲೆಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಮತ್ತು ಪಾಕಿಸ್ತಾನದ ಗಡಿ ಕಾರ್ಯಾಚರಣೆ ತಂಡ (ಬ್ಯಾಟ್‌) ಈ ಕೃತ್ಯವನ್ನು ನಡೆಸುವ ಬಗ್ಗೆ ತಿಳಿಸಲಾಗಿತ್ತು.

ಗುಪ್ತಚರ ಮಾಹಿತಿಯನ್ನು ನಂಬುವುದಾದರೆ, ಪಾಕ್‌ ಆಕ್ರಮಿತ ಕಾಶ್ಮೀರದಿಂದ ಪಾಕ್‌ನ ಮೂವರು ಆತ್ಮಾಹುತಿ ತಂಡಗಳು ಹೊರಟಿದ್ದು, ಒಂದು ತಂಡ ಉರಿಯನ್ನು ತಲುಪಿದೆ ಮತ್ತು ಇದೀಗ ಸೇನಾ ನೆಲೆಗೆ ದಾಳಿ ಮಾಡಿದೆ.

ಇನ್ನೊಂದು ತಂಡ ಪೂಂಛ್‌ ಪ್ರದೇಶಕ್ಕೆ ತೆರಳಿದ್ದು, ಅಲ್ಲಿ ಸೇನೆ ಮತ್ತು ಪೊಲೀಸರು ಅದನ್ನು ಹಿಮ್ಮೆಟ್ಟಿಸಿದ್ದಾರೆ. ಮೂರನೇ ತಂಡ ಎಲ್ಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅದು ಶ್ರೀನಗರ ಹೆದ್ದಾರಿಯ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಉತ್ತರ ಮತ್ತು ದಕ್ಷಿಣ ಕಾಶ್ಮೀರದಲ್ಲಿ ಸೇನೆ, ಸಿಆರ್‌ಪಿಎಫ್‌, ಬಿಎಎಸ್‌ಎಫ್‌ ವಾಹನಗಳ ಮೇಲೆ ದಾಳಿ ನಡೆಸುವ ಅಪಾಯವಿದೆ ಎನ್ನಲಾಗಿದೆ.


Viewing all articles
Browse latest Browse all 7056

Latest Images

Trending Articles



Latest Images

<script src="https://jsc.adskeeper.com/r/s/rssing.com.1596347.js" async> </script>