Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ದಾರಿ ದೀಪ: ವಿಚಾರ ಮಾಡಿ ನಡೆಯಿರಿ

$
0
0

ದಾರಿದೀಪ: ಹರೀಶ್ ಕಾಶ್ಯಪ್

ಹಲವು ಸಣ್ಣ ಸಣ್ಣ ಅನಾರೋಗ್ಯ ಸಮಸ್ಯೆಗಳು ಸೇರಿ ಹತಾಶನಾಗಿರುವೆ. ಸರಿಯಾಗುವ ದಾರಿ ತೋರಿ.

ಎಂ.ಎಸ್‌.ಗುರುಮೂರ್ತಿ| ಹರಿಹರ

ಕಿವಿಯಲ್ಲಿ ಮಾರ್ದನಿ, ಮರೆವು, ಉದರ ಶೂಲೆ, ಕಣ್ಣು ಬೇನೆ ಇತ್ಯಾದಿ ಸಮಸ್ಯೆಗಳು ಮುಖ್ಯವಾಗಿ ನಿಮ್ಮ ಮಾನಸಿಕ ಸ್ವಾಸ್ಥ್ಯ ಕೆಡಿಸಿವೆ. ಜಾತಕದ ರವಿ-ಚಂದ್ರ ಮತ್ತು ಬುಧರ ದುಸ್ಥಿತಿಯಿಂದ ಕರ್ಮ ಬಾಧೆ ಉಂಟಾಗುವುದು. ಶ್ರೀಧರ್ಮಸ್ಥಳ ಆಯುರ್ವೇದ ಆಸ್ಪತ್ರೆಯಲ್ಲಿ ಎರಡುವಾರ ಪೂರ್ಣ ಚಿಕಿತ್ಸೆಗೆ ಸೇರುವುದು-ಅನಂತರ ಬಿಡದೇ ಅಲ್ಲಿನ ಪಥ್ಯಾಪತ್ಯ ಅನುಸರಿಸಿ ಗುಣಮುಖರಾಗಿ. ಕುಳಿತಲ್ಲೇ ಕೊರಗುತ್ತಾ, ಸ್ವಚಿಕಿತ್ಸಾ ಪ್ರಮಾದ ಮಾಡುತ್ತಾ ಇದ್ದರೆ ಆರೋಗ್ಯ ನಿಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ಎಚ್ಚರ.

ನನ್ನ ಮಿತ್ರರು ಮುಸ್ಲಿಂ ಮತದವರು, ಅವರ ಮಕ್ಕಳ ಮದುವೆ ಮತ್ತು ಅನಾರೋಗ್ಯ ಸಮಸ್ಯೆ ವಿವರಿಸಿದರೆ ಪರಿಹಾರ ಮಾಡಬಹುದೇ?

ಚಂದ್ರಶೇಖರ್‌ ಎಂ| ತಲಕಾವೇರಿ ಬಡಾವಣೆ

ಅವಶ್ಯವಾಗಿ. ತಕ್ಕ ಮಟ್ಟಿಗೆ ಪರಿಹಾರಗಳನ್ನು ಮಾಡಬಹುದು. ಅವರ ವಯೋಸಹಜ ಸ್ಪಂದನೆ ಹೇಗೆ ಎನ್ನುವುದರ ಮೇಲೆ ಪರಿಹಾರ ಅವಲಂಬಿತ. ಅವರ ಮನೆಯಲ್ಲೇ ಪ್ರಶ್ನಾವಿಧಿ ನಡೆಸಿದರೆ ಬಾಧೆ ಏನೆಂದು ಬೇಗ ತಿಳಿವುದು. ಅನ್ಯಕಡೆ ಫಲ ತಡವಾಗುತ್ತದೆ. ನಿಮ್ಮ ಕಾಳಜಿ, ಮಧ್ಯಸ್ಥಿಕೆಗೆ ಅವರು ತೆರೆದಿರುವರು ಎಂದರೆ ಮುಂದುವರೆಯಬಹುದು.

ಪಿ.ಯು.ಸಿ ಓದಿದ ಮಗನಿಗೆ ಮುಂದೆ ಏನು ಓದಿಸಿದರೆ ಒಳ್ಳೆಯದು ಎಂಬ ಗೊಂದಲ. ಪರಿಹಾರ ಹೇಳಿ.

ಜಮುನಾ ಜಿ. ಕೊತ್ತನೂರು| ಬೆಂಗಳೂರು

'ನಾನಾ ವಿಷಯೇಷು ಚಿತ್ತ ವಿಪ್ಲವೇ' ಎಂಬಂತೆ ಅನೇಕ ಆಸಕ್ತಿಗಳ ಹೊಂದಿ, ಸೈನ್ಸ್‌ ಕೂಡ ಮಾಡುವೆ ಎಂದರೆ ಕಷ್ಟವಾದೀತು. ಸದ್ಯ ಬಲಹೀನ ಶನಿದಶೆಯಿದ್ದು, ಮೆಡಿಕಲ್‌ಗೆ ಕಷ್ಟಸಾಧ್ಯ. ಯತ್ನ ಮಾಡಬಹುದು, ಆದರೆ ಅದೊಂದೇ ಮಾಡಬೇಕು. ಹಾಡು, ಹಸೆ, ಇತರೆ ಕ್ರೀಡೆ ಎಲ್ಲಾ ಬಿಟ್ಟು ಓದಬೇಕು. ಅಥವಾ ಬಿಎಸ್ಸಿ ಮಾಡಿ ಪೆಥಾಲಜಿಯಲ್ಲಿ ತಜ್ಞನಾಗಬಹುದು. ಹೆಚ್ಚಿನ ವಿವರಗಳಿಗೆ ಜಾತಕ ಪರಿಶೀಲನೆ, ಆಪ್ತ ಸಲಹೆ ಬೇಕಿದೆ.

ಸಂತಾನ ವಿಷಯದ ಸಮಸ್ಯೆ. ಒಮ್ಮೆ ಗರ್ಭ ಧರಿಸಿ ಆಗಲಿಲ್ಲ. ಗರ್ಭ ಸಂಬಂಧಿ ಸಮಸ್ಯೆ ಸರಿಯಾಗಿ ಮಕ್ಕಳಾಗುವುದೇ?

ಗಿರೀಶ್‌ ಎಚ್‌., ಹುಬ್ಬಳ್ಳಿ

ಯಾವುದಕ್ಕೂ ತಾಳ್ಮೆ-ಭರವಸೆ ಬೇಕು. ನಮ್ಮ ಅವಸರಕ್ಕೆ ಏನೂ ಆಗದು. ಆದರೂ ಎಡವಟ್ಟಾಗುವುದು. ರೋದನ ತಪ್ಪದು! ಆಗುವುದನ್ನು ಆಗಲು ಬಿಡಿ, ಅದರ ಮೇಲೆ ಒತ್ತಡದಿಂದ ಜೀವಿಸಬೇಡಿ. ಏನೇನೋ ಪೂಜೆ ಪುನಸ್ಕಾರ ಎಂದು ತಿರುಗಲೂ ಬೇಡಿ. ಯೋಗ್ಯ ವೈದ್ಯರನ್ನು ಅರಸಿ ಚಿಕಿತ್ಸೆ ಪಡೆಯಿರಿ. ಈರ್ವರೂ ಯೋಗಾಸನ, ಧ್ಯಾನ ತರಬೇತಿ ಪಡೆದು ಮಾನಸಿಕವಾಗಿ ಸ್ವಸ್ಥರಾಗಿ. ಆ ನಂತರ ಆಗುವುದು ಒಳ್ಳೆಯದೆ ಎಂದು ಬೇರೆ ಹೇಳಬೇಕಿಲ್ಲ!

20ರ ಪ್ರಾಯದ ಮಗ ಮನೆ ಬಿಟ್ಟು ಹೋಗಿ ವರ್ಷವಾಯ್ತು(ಲಕ್ಕೂರಿನಿಂದ). ಮರಳಿ ಬರುವನೇ?

ರಾಮಯ್ಯ| ಮಾಲೂರು

ನಮ್ಮ ಕಾಳಜಿ, ಸಾಂತ್ವನ ನಿಮಗಿದೆ. ಭರವಸೆ ಇರಲಿ. ಏನೋ ಸಾಧಿಸುವ ಛಲವಂತ ಜಾತಕವಿದೆ ನಿಮ್ಮ ಮಗನದ್ದು. ದೈವ ರಕ್ಷೆಯೂ ಇದೆ. ದುಷ್ಟರ ಕಾಟವೂ ಇದೆ! ಇದರಲ್ಲಿ ಆತನೇನು ಮಾಡಬಲ್ಲ ಮತ್ತು ಎಲ್ಲಿರುವ ಎಂಬುದು ಆತಂಕ ಪಡುವ ವಿಚಾರ. ಇದಕ್ಕಾಗಿ ಆಕರ್ಷಣೆ, ಬಾಧೆ ನಿವಾರಣಾ ತಂತ್ರಗಳ ಮೊರೆ ಹೋಗಬೇಕು. ಪ್ರಶ್ನಾವಳಿ ನಡೆಸಿ ನೋಡಬೇಕು.

ಸಾಲ ಸೋಲ ತೊಂದರೆ ಅಧಿಕವಾಗಿ ಕುಟುಂಬ ನಡೆವುದೇ ದುಸ್ತರವಾಗಿದೆ. ದಾರಿ ತೋರಿ.

ಕಲಾವತಿ ಮಂಜು| ಬಿಡದಿ

ಆಚಾರವನ್ನೇ ವಿಚಾರ ಮಾಡಿ ನಡೆಸಬೇಕು. ಇನ್ನು ಅನಾಚಾರವಾದ ಸಾಲಸೋಲ, ಬಡ್ಡಿ ಬಾಜಿಗಳಲ್ಲಿ ವಿಚಾರ ಮಾಡದೇ ನಡೆದರೆ ಒಳಿತಾಗುವುದೆ? ಇರುವ ಸಾಲವನ್ನು ಪುನಃ ಸಾಲ ಮಾಡದೇ, ದುಡಿದು ತೀರಿಸಬೇಕು. ದುಡಿಮೆ ಹೆಚ್ಚಾಗಲು ಏನು ಮಾಡಬೇಕು ಎಂಬುದನ್ನು ಚಿಂತಿಸಿ. ಅಷ್ಟನ್ನೇ ಮಾಡಿ. ಪ್ರತೀ ಮಂಗಳವಾರ ಉಪವಾಸವಿದ್ದು, ಶ್ರೀ ನರಸಿಂಹನ ದರ್ಶನ, ಸೇವೆ ಮಾಡುತ್ತ ನಡೆಯಿರಿ. ಸುಧಾರಿಸುವುದು.



Viewing all articles
Browse latest Browse all 7056

Latest Images

Trending Articles



Latest Images

<script src="https://jsc.adskeeper.com/r/s/rssing.com.1596347.js" async> </script>