Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ರಾಹು ಸೂರ್ಯಗ್ರಹಣ

$
0
0

ರತ್ನರಾಜ ಜೈನ್‌

ಮೊನ್ನೆ ಸೆಪ್ಟೆಂಬರ್‌ ಒಂದರಂದು ಗುರುವಾರ ಸಿಂಹ ರಾಶಿ ಮಖ ನಕ್ಷ ತ್ರ ದಲ್ಲಿ ರಾಹುಗ್ರಸ್ತ ಸೂರ್ಯ ಕಂಕಣ ಗ್ರಹಣ ಸಂಭವಿಸಿತು. ಇದು ಭಾರತದಲ್ಲಿ ಗೋಚರವಾಗಿಲ್ಲ. ಆದರೂ ಇದರ ಪ್ರತಿಫಲ ವಿಶ್ವವ್ಯಾಪಿ ಉಂಟಾಗಲಿದೆ. 70 ವರ್ಷ ಪ್ರಾಯ ಮೀರಿದವರಿಗೆ ಕಂಟಕ ಭಯ ಎದುರಾಗಿದೆ. ಯುವ ಜನರು ತನ್ನ ತಂದೆ ತಾಯಿಯರ ಬಗ್ಗೆ ತಿರಸ್ಕಾರ ವ್ಯಕ್ತ ಪಡಿಸುವರು. ಚತುಷ್ಪಾದ ಪ್ರಾಣಿಗಳಿಗೆ ನಿಗೂಢ ರೋಗ ಸಂಭವ. ವಾಹನ ರೈಲು ವಿಮಾನ ಅಪಘಾತಗಳು ಆಗುವ ಸಂಭವ. ಉಗ್ರಗಾಮಿಗಳ ಬೆದರಿಕೆ ಮುಂದುವರಿಯುವ ಸಾಧ್ಯತೆ.

ಭಾರತದಲ್ಲಿ ಪ್ರತಿಷ್ಠಿತ ರಾಜಕಾರಣಿಗಳು, ಇತರರು ಅರಿಷ್ಟ ಎದುರಿಸುವರು. ಸಭೆ ಸಮಾರಂಭಗಳಲ್ಲಿ ಹೂಗುಚ್ಛ ಹೂಗಳ ಹಾರ ಇತರ ಅಮೂಲ್ಯ ವಸ್ತುಗಳನ್ನು ಸ್ವೀಕರಿಸಿದೆ ಇರುವುದು ಕ್ಷೇಮಕರ. ಸಾರ್ವಜನಿಕ ಎಲ್ಲಾ ಭಾಗಗಳಲ್ಲಿ ವಿದ್ಯುತ್‌ ಉತ್ಪಾದನೆ ಕೇಂದ್ರಗಳಲ್ಲಿ ವಿಶೇಷ ಎಚ್ಚರಿಕೆ ಅಗತ್ಯ.

1.9.2016 ಸೂರ್ಯ ಗ್ರಹಣ 16.9.2016 ಕುಂಭ ರಾಶಿಯಲ್ಲಿ ಚಂದ್ರ ಗ್ರಹಣ ಹೀಗೆ 15 ದಿನಗಳ ಅಂತರದಲ್ಲಿ ಬಂದರೆ ಭೂಕಂಪ ಚಂಡಮಾರುತ ಸುನಾಮಿ ಅಲೆಗಳು ಬರುವ ಸಾಧ್ಯತೆ ಇದೆ. ಈ ಹಿಂದೆ ಮೊದಲೇ ಪತ್ರಿಕೆಗಳಲ್ಲಿ ಸೂಚಿಸಿದಂತೆ 1993ರಲ್ಲಿ ಲಾತೂರ್‌ ಭೂಕಂಪ 2001ರಲ್ಲಿ ಗುಜರಾತ್‌ 1999ರಲ್ಲಿ ಟರ್ಕಿ ಭೂಕಂಪ 2004ರ ಕಾಲದಲ್ಲಿ ಸುನಾಮಿ ಉಂಟಾಯಿತು.

ಹಾಗಾಗಿ ಈ ಸಲವೂ ಗ್ರಹಣ ಹತ್ತಿರ ದಿನಗಳಲ್ಲಿ ಭಾರತದ ಉತ್ತರ ಈಶಾನ್ಯ ವಾಯುವ್ಯ ಯುರೋಪ್‌ ಏಷ್ಯಾ ಖಂಡದ ಕೆಲವು ಭಾಗಗಳಲ್ಲಿ ಭೂಕಂಪ ಚಂಡ ಮಾರುತಗಳು ಉಂಟಾಗುವುದು. ಬರಲಿರುವ ಸಂಕಷ್ಟಗಳಿಂದ ಪಾರಾಗಲು ಗ್ರಹಣ ದಿನ ಶಿವನಿಗೆ ರುದ್ರಾಭಿಷೇಕ ಹಾಗೂ ಮೃತ್ಯುಂಜಯ ಮಂತ್ರ ಪಠಣ ಆಲಿಸುವುದರಿಂದ ಕ್ಷೇಮವಾಗಬಹುದು.


Viewing all articles
Browse latest Browse all 7056

Latest Images

Trending Articles